ಕೊಡಚಾದ್ರಿ, ಮಡಿಕೇರಿಯಲ್ಲಿ `ಅಜಿತ್` ಹಾಡು
Posted date: 10 Tue, Sep 2013 – 09:02:49 AM

 ಬಿ.ಎಂ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ.ಪ್ರೇಮ್ ಅವರು ನಿರ್ಮಿಸುತ್ತಿರುವ ‘ಅಜಿತ್ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಕೊಡಚಾದ್ರಿ ಹಾಗೂ ಮಡಿಕೇರಿಯಲ್ಲಿ ನಡೆಯಲಿದೆ.  ಚಿರಂಜೀವಿ ಸರ್ಜಾ ಹಾಗೂ ನಿಕ್ಕಿ ಅಭಿನಯಿಸುವ ಈ ಹಾಡುಗಳಿಗೆ ಹರ್ಷ ನೃತ್ಯ ನಿರ್ದೇಶನ ಮಾಡಲಿದ್ದಾರೆ.
    ಮಹೇಶ್‌ಬಾಬು ಈ ಚಿತ್ರದ ನಿರ್ದೇಶಕರು. ಐದು ಹಾಡುಗಳಿರುವ ಈ ಚಿತ್ರಕ್ಕೆ ಯುವನ್‌ಶಂಕರ್‌ರಾಜಾರ ಸಂಗೀತ ನಿರ್ದೇಶನವಿದೆ. ಮೋಹನ್ ಛಾಯಾಗ್ರಹಣ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿನೋದ್ ಮನೋಹರ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ನಿಕ್ಕಿ, ಅರ್ಪಿತ್(ಬಾಂಬೆ), ರಾಕ್‌ಲೈನ್ ಸುಧಾಕರ್, ಶಿವಮಂಜು ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed